News
×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ




ನಮ್ಮ ಸೋಮಣ್ಣ



ನನ್ನ ಕ್ಷೇತ್ರ ಮಾದರಿ ಕ್ಷೇತ್ರ...

ನನ್ನ ಕ್ಷೇತ್ರದ ಜನರ ಮತಾಶೀರ್ವಾದವೇ ನನಗೆ ಸದಾ ಶ್ರೀರಕ್ಷೆ. ನಾನು ಕಾರ್ಪೋರೇಟರ್ ಆಗಿರಲಿ, ಶಾಸಕ ಆಗಿರಲಿ ನಾನು ಪ್ರತಿನಿಧಿಸುವ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ.

ನಾನು ಮೊದಲ ಬಾರಿ ವಿಜಯನಗರ ವಾರ್ಡ್ ನ ಕಾರ್ಪೊರೇಟರ್ ಆಗಿದ್ದಾಗ ಆ ಪ್ರದೇಶ ತೀರಾ ಹಿಂದುಳಿತ್ತು. ಎರಡು ಅವಧಿಗೆ ಕಾರ್ಪೊರೇಟರ್ ಆಗಿ ಅಲ್ಲಿಯ ಚಿತ್ರಣವನ್ನೇ ಬದಲಿಸಿದ್ದೆ. ಮೂರು ಬಾರಿ ಬಿನ್ನಿಪೇಟೆ ಕ್ಷೇತ್ರದ ಶಾಸಕನಾಗಿ ಇಡೀ ಕ್ಷೇತ್ರವೇ ಮೆಚ್ಚುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ.

ಈಗ ಗೋವಿಂದರಾಜ ನಗರ ಕ್ಷೇತ್ರದಲ್ಲಂತೂ 30 ವರ್ಷದಲ್ಲಿ ಆಗುವ ಕೆಲಸವನ್ನು ಮೂರೇ ವರ್ಷದೊಳಗೆ ಮಾಡಿ ತೋರಿಸಿದ್ದೇನೆ. ನನ್ನ ಕ್ಷೇತ್ರದಲ್ಲಿ ಮಧ್ಯಮ ವರ್ಗದವರು ಮತ್ತು ಬಡವರೇ ಹೆಚ್ಚಿದ್ದಾರೆ. ಪಾಪ ಅವರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಡವೆ? ಒಬ್ಬ ಆಟೊ ಚಾಲಕ, ಕೂಲಿ, ರಸ್ತೆ ಪಕ್ಕ ತರಕಾರಿ ಮಾರಿ ಜೀವನ ಮಾಡೋ ಬಡಪಾಯಿ ಆರೋಗ್ಯ ಕೆಟ್ಟರೆ ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ಚಿಕಿತ್ಸೆ ಪಡೆಯಲು ಸಾಧ್ಯವೆ? ಇದಕ್ಕಾಗಿಯೇ ನಾನು ಅತ್ಯಾಧುನಿಕ ಸರಕಾರಿ ಶಾಲೆ, ಚಿಕಿತ್ಸಾಲಯ, ಡಯಾಲಿಸಿಸ್ ಕೇಂದ್ರ, ಲ್ಯಾಬ್, ಆಂಬ್ಯುಲೆನ್ಸ್ ಮತ್ತು ಹೈಟೆಕ್ ಆಸ್ಪತ್ರೆಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ.

ಇನ್ನು ಹೈಟೆಕ್ ಗ್ರಂಥಾಲಯಗಳಿಗೆ ನನ್ನ ಕ್ಷೇತ್ರ ಫೇಮಸ್. ಯುವ ಜನರಿಗೆ ಉನ್ನತ ಉದ್ಯೋಗ ಸಿಗಲಿ ಎಂಬ ಆಶಯದೊಂದಿಗೆ 4 ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸಲಾಗಿದೆ. ಎರಡು ಯೋಗ ಸೆಂಟರ್ ಇದೆ. 16 ಕಡೆ ಬ್ಯಾಡ್ಮಿಂಟನ್ ಕೋರ್ಟ್, ಜಿಮ್ ಗಳಿವೆ. ಕ್ಷೇತ್ರದಾದ್ಯಂತ 137 ಕುಡಿಯುವ ನೀರಿನ ಘಟಕಗಳಿವೆ. ಟೇಲರಿಂಗ್ ಸೆಂಟರ್ ಗಳಿವೆ.

ಬಸ್ ನಿಲ್ದಾಣ, ಪೊಲೀಸ್ ಸ್ಟೇಷನ್ ಗಳೂ ನಮ್ಮಲ್ಲಿ ಸುಸಜ್ಜಿತ. ಆಟವಾಡಲು ಹೈಟೆಕ್ ಕ್ರೀಡಾಂಗಣಗಳಿವೆ. ನಮ್ಮ ಕ್ಷೇತ್ರದ ಜನರಿಗೆ ಯಾವುದೇ ಸೌಲಭ್ಯಗಳೂ ಇಲ್ಲ ಅನ್ನೋದಿಲ್ಲ. ಕೋವಿಡ್ ಸಂಕಟದ ಸಂದರ್ಭದಲ್ಲಿ ಕ್ಷೇತ್ರದ ಜನರಿಗಾಗಿ ಸಾವಿರಾರು ಆಹಾರದ ಪ್ಯಾಕೇಟ್ ಗಳನ್ನು ವಿತರಿಸಿದ್ದೇವೆ. ಮಾಸ್ಕ್, ಸ್ಯಾನಿಟೈಸರ್ ಪೂರೈಸಿದ್ದೇವೆ. ತುರ್ತು ಅಗತ್ಯ ಇರುವವರಿಗೆ ಆಂಬ್ಯುಲೆನ್ಸ್, ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದೇವೆ.

ಅಂದು ಕಾರ್ಪೊರೇಟರ್ ಆಗಿರಲಿ, ಇಂದು ಮಿನಿಸ್ಟರ್ ಆಗಿರಲಿ. ಕ್ಷೇತ್ರದ ಯಾರೇ ಬಂದು ಸಣ್ಣ ಸಮಸ್ಯೆ ಹೇಳಿಕೊಂಡರೂ ಸ್ಪಂದಿಸುತ್ತೇನೆ. ಕ್ಷೇತ್ರದ ಪ್ರತಿ ಕಾಮಗಾರಿಗಳ ಮೇಲೆ ನಾನೇ ಸ್ವತಃ ನಿಗಾ ಇರಿಸುತ್ತೇನೆ. ಹಾಗಾಗಿ ವಿಳಂಬವಿಲ್ಲದೆ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಸಾಧ್ಯವಾಗುತ್ತಿದೆ. ಮುಖ್ಯಮಂತ್ರಿಗಳ ಬೆನ್ನು ಬಿದ್ದು ಅನುದಾನ ತರುತ್ತೇನೆ. ಸರಕಾರ ಯಾವುದೇ ಹೊಸ ಯೋಜನೆ ಜಾರಿಗೆ ತಂದರೂ ಅದು ನನ್ನ ಕ್ಷೇತ್ರದಲ್ಲೇ ಮೊದಲು ಜಾರಿ ಮಾಡಲು ಪ್ರಯತ್ನಿಸುತ್ತೇನೆ. ಜಗಳ ಮಾಡಿಯಾದರೂ ಸರಿ, ನನ್ನ ಕ್ಷೇತ್ರದಲ್ಲಿ ಹೊಸ ಹೊಸ ಸೌಲಭ್ಯ ಕಲ್ಪಿಸುತ್ತೇನೆ. ಹಿಂದೆ ಎಷ್ಟೋ ಮುಖ್ಯಮಂತ್ರಿಗಳು, ''ಇದು ಆಗೋದಿಲ್ಲ ಹೋಗ್. ಇದನ್ನ ಕೊಡೋದಿಲ್ಲ ಹೋಗ್'' ಎಂದು ವಾಪಸ್ ಕಳಿಸಿದಾಗ ಮತ್ತೊಮ್ಮೆ ಹೋಗಿ ಅವರ ಕಾಲಿಗೆ ಬಿದ್ದಾದರೂ ನನ್ನ ಕ್ಷೇತ್ರದ ಜನರಿಗಾಗಿ ಮೂಲಸೌಕರ್ಯ ಯೋಜನೆಗಳಿಗೆ ಒಪ್ಪಿಗೆ ಪಡೆಯಲು ಯಶಸ್ವಿಯಾಗಿದ್ದೇನೆ.

ಹೀಗಾಗಿಯೇ ಗೋವಿಂದರಾಜ ನಗರ ಕ್ಷೇತ್ರದ ಜನ ಜಾತಿ, ಧರ್ಮ, ವರ್ಗದ ಮುಖ ನೋಡದೆ, ''ಬಿಡಪ್ಪ ಸೋಮಣ್ಣ ಒಳ್ಳೆಯ ಕೆಲಸಗಾರ'' ಎಂದು ನನಗೇ ಆಶೀರ್ವದಿಸುತ್ತಿದ್ದಾರೆ.