News
×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ



ನಮ್ಮ ಸೋಮಣ್ಣ

ದಸರಾ, ಪ್ರವಾಹದ ಸವಾಲು

ಮುಂದೆ ನಾನು 2019ರಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ಪ್ರತಿಯೊಬ್ಬರೂ ಅದ್ಭುತ ಎಂದು ಶ್ಲಾಘಿಸುವ ರೀತಿಯಲ್ಲಿ ದಸರಾ ಉತ್ಸವ ಮಾಡಿಸಿ ತೋರಿಸಿದೆ. ಸ್ಥಳೀಯ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಇದು ಸಾಕ್ಷಿ.

ದಸರಾಗೆ ಕೇವಲ 27 ದಿನ ಇರುವಾಗ ನನಗೆ ಉಸ್ತುವಾರಿ ವಹಿಸಿದ್ದರು. ಇವನು ಈಗ ಇಲ್ಲಿ ಬಂದು ಏನ್ ಮಾಡ್ತಾನೆ ಎಂಬ ಪ್ರಶ್ನೆ ಎಲ್ಲರ ಮುಂದಿತ್ತು. ನಾನು ಮೊದಲು ಚಾಮುಂಡಿ ಬೆಟ್ಟವನ್ನು ದಿಟ್ಟ ಕ್ರಮದಿಂದ ಕ್ಲೀನ್ ಮಾಡಿದೆ. ಇದು ಜನರಲ್ಲಿ ಸಂಚಲನವುಂಟು ಮಾಡಿತು. ಇವನು ಏನೋ ಒಳ್ಳೆಯದು ಮಾಡ್ತಾನೆ ಎಂಬ ವಿಶ್ವಾಸ ಮೂಡಿತು. ತಾಯಿ ಚಾಮುಂಡೇಶ್ವರಿಯ ಕೃಪೆಯಿಂದಾಗಿ ಒಂದೇ ಒಂದು ವಿಘ್ನ ಎದುರಾಗದೆ ದಸರಾ ಅದ್ಧೂರಿಯಾಗಿ ಮುಗಿಯಿತು. ನಾಡೇ ಮೆಚ್ಚಿಕೊಂಡಿತು.

ಕೊಡಗು ಪ್ರವಾಹ, ಬೆಟ್ಟ ಕುಸಿತದ ದುರಂತದ ವೇಳೆ ಎನ್ ಡಿ ಆರ್ ಎಫ್ ಸಿಬ್ಬಂದಿಯೊಂದಿಗೆ ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೆ 70 ವರ್ಷದ ನಾನು ಹತ್ತಾರು ಕಿ.ಮೀ ಹೆಜ್ಜೆ ಹಾಕಿದೆ. ನಾನು ಜತೆಗಿದ್ದ ಕಾರಣ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ನೈತಿಕ ಸ್ಥೈರ್ಯ ಬಂದಂತಾಯಿತು. ಅಚ್ಚರಿ ಎನ್ನುವ ರೀತಿಯಲ್ಲಿ ಅಲ್ಲಿಯ ಪ್ರವಾಹ ಪೀಡಿತರಿಗೆ ಪುನರ್ವಸತಿ ಕಲ್ಪಿಸಿಕೊಡಲಾಯಿತು.

ದಸರಾಗೆ ಅಭೂತಪೂರ್ವ ಸಿದ್ಧತೆ ಮತ್ತು ಕೊಡಗು ಪ್ರವಾಹ ಪರಿಹಾರದಲ್ಲಿ ಮುಂಚೂಣಿಯಲ್ಲಿ ಭಾಗಿಯಾಗಿದ್ದು ನನ್ನ ಜೀವನದಲ್ಲಿ ಮರೆಯಲಾರದ ಘಟನೆ.